      ಮೂಲದೊಡನೆ ಪರಿಶೀಲಿಸಿ

ಎಕ್ಸ್‍ಕಿರಣ ಖಗೋಳಶಾಸ್ತ್ರ-
	ವಿಶ್ವದ ಎಕ್ಸ್‍ಕಿರಣಾಕರಗಳನ್ನು ಶೋಧಿಸಿ ಅಭ್ಯಸಿಸುವ ಖಗೋಳಶಾಸ್ತ್ರ ವಿಭಾಗ (ಎಕ್ಸ್‍ರೇ ಅಸ್ಟ್ರಾನಮಿ). ನಕ್ಷತ್ರ, ಬ್ರಹ್ಮಾಂಡ (ಗ್ಯಾಲಾಕ್ಸಿ), ನೆಬ್ಯುಲ, ಕ್ವಾಸಾರ್, ಪಲ್ಸಾರ್ ಇವೆಲ್ಲವೂ ವಿದ್ಯುತ್ಕಾಂತ ತರಂಗಗಳನ್ನು ವಿಸರಿಸುವ ಆಕರಗಳು. ರೇಡಿಯೊ, ಅತಿರಕ್ತ, ದೃಗ್ಗೋಚರ ಬೆಳಕು, ಅತಿನೇರಳೆ, ಎಕ್ಸ್‍ಕಿರಣಗಳು, ಗಾಮಕಿರಣಗಳು ಮುಂತಾದ ವಿವಿಧ ವಿದ್ಯುತ್ಕಾಂತ ತರಂಗಗಳು ಅವುಗಳ ಆಕರಗಳಿಂದ ವಿಶ್ವದ ಎಲ್ಲೆಡೆಗೂ ಸೆಕೆಂಡಿಗೆ 3,00,000 ಕಿ.ಮೀ. ವೇಗದಿಂದ ಪ್ರವಹಿಸುತ್ತವೆ. ಒಂದು ಆಕರ ರೇಡಿಯೊ ಮುಂತಾದ (ಬೆಳಕಿನವರೆಗಿನ) ದೀರ್ಘ ತರಂಗಗಳನ್ನು ಮಾತ್ರ ವಿಸರಿಸಬಹುದು. ಇವು ಅತಿರಕ್ತ ಆಕರಗಳು. ಇನ್ನೊಂದು ಆಕರ ಅತಿನೇರಳೆ ಮುಂತಾದ (ಬೆಳಕಿನ ತರುವಾಯದ) ಹ್ರಸ್ವತರಂಗಗಳನ್ನು ಮಾತ್ರ ವಿಸರಿಸಬಹುದು. ಇವು ಅತಿನೇರಿಳೆ ಆಕರಗಳು. ಇವೆರಡು ವರ್ಗದ ಆಕರಗಳನ್ನು ಬರಿಗಣ್ಣಿಂದ ಅಥವಾ ದೂರ ಛಾಯಾಗ್ರಹಣದಿಂದ ಗುರುತಿಸುವಂತಿಲ್ಲ. ದೃಗ್ಗೋಚರ ಬೆಳಕನ್ನು ಇವು ಸೇರದಿರುವುದೇ ಇದರ ಕಾರಣ. ಇನ್ನು ಮೂರನೆಯ ವರ್ಗದ ಆಕರಗಳು ಬೆಳಕನ್ನೂ ಒಳಗೊಂಡಂತೆ ಇತರ ತರಂಗಗಳನ್ನೂ ವಿಸರಿಸಬಹುದು. ಇವು ದೃಗ್ಗೋಚರ ನಕ್ಷತ್ರಗಳು. ಸೂರ್ಯ ಒಂದು ಉದಾಹರಣೆ. ಆಕಾಶದಲ್ಲಿ ಕಾಣುವ ಮಿನುಗು ಚುಕ್ಕೆಗಳೆಲ್ಲವೂ ದೃಗ್ಗೋಚರ ನಕ್ಷತ್ರಗಳು.

	ಒಂದು ಆಕರದಿಂದ ವಿಸರಿತವಾಗುವ ವಿದ್ಯುತ್ಕಾಂತ ತರಂಗಗಳು ಭೂತಲವನ್ನು (ಎಂದರೆ ವೀಕ್ಷಣಾಲಯವನ್ನು) ಪ್ರವೇಶಿಸಿ ತನ್ಮೂಲಕ ಆ ಆಕರದ ಇರುವನ್ನು ವ್ಯಕ್ತಪಡಿಸಬೇಕು. ಇಲ್ಲಿ ಎದುರಾಗುವ ನಾಲ್ಕು ಮುಖ್ಯ ಸಮಸ್ಯೆಗಳನ್ನು ಮುಂದೆ ವಿವರಿಸಿದೆ. ಮೊದಲನೆಯದು ದೂರ. ವಿಶ್ವದ ಮಹಾ ವ್ಯಾಪ್ತಿಯಲ್ಲಿ ಅಸಂಖ್ಯಾತ ಆಕರಗಳಿಂದ ಹೊರಟ ತರಂಗಗಳು ಇನ್ನೂ ಭೂಮಿಯನ್ನು ತಲುಪದಿರುವುದು ಶಕ್ಯ. ಆದ್ದರಿಂದ ಅವೆಷ್ಟೋ ಆಕರಗಳ ಇರವು ನಮಗೆ ತಿಳಿಯುವುದೇ ಇಲ್ಲ. ಎರಡನೆಯದಾಗಿ ಶಕ್ತಿಕ್ಷಯ. ಆಕರದಿಂದ ವಿಸರಿತವಾದ ತರಂಗ ಮೂಲತಃ ಶಕ್ತಿಹೀನವಾಗಿದ್ದರೆ ಅಥವಾ ಅತಿದೂರದಲ್ಲಿದ್ದು ದೂರಗಮನದಲ್ಲಿ ಶಕ್ತಿ ಕ್ಷಯಿಸಿದರೆ ಭೂತಲದಲ್ಲಿ ಅದನ್ನು ಗುರುತಿಸುವುದು ಕಷ್ಟ. ಮೂರನೆಯದಾಗಿ ತರಂಗ ಗಮಿಸುವ ಪಥದಲ್ಲಿ ಎದುರಾಗುವ ಅಡಚಣೆಗಳು ಮತ್ತು ಅವುಗಳ ಪ್ರಭಾವಗಳು. ಇವುಗಳ ಪರಿಣಾಮವಾಗಿ ಎಕ್ಸ್‍ಕಿರಣಗಳು ಭೂಮಿಯನ್ನು ತಲುಪದಿರಬಹುದು ಅಥವಾ ಪ್ರಭಾವಿತವಾಗಬಹುದು. ಕೊನೆಯದಾಗಿ ಭೂಪರಿಸರ. ಭೂಮಿಯನ್ನು ಆವರಿಸಿಕೊಂಡಿರುವ ಪರಿಸರವನ್ನು ಹಾಯ್ದು ತರಂಗ ಭೂತಲವನ್ನು ಮುಟ್ಟಬೇಕು. ನೆಲದಿಂದ ಸರಾಸರಿ 2.4 ಕಿ.ಮೀ. ಎತ್ತರದವರೆಗೆ ವಾಯುಮಂಡಲ (ಕ್ರಮೇಣ ವಿರಳವಾಗುತ್ತ) ವ್ಯಾಪಿಸಿದೆ. ಅಲ್ಲಿಂದ ಮೇಲೆ ವಾಯುಕಣಗಳು ತೀರ ವಿರಳವಾಗುತ್ತ ಹೋಗಿ 15-50 ಕಿ.ಮೀ. ವಲಯದಲ್ಲಿ ಒಂದು ಓeóÉೂೀನ್ (ಔ3) ಗೋಳ ಏರ್ಪಡುವುದು. ವಾಯುಮಂಡಲದ ಆಕ್ಸಿಜನ್ನಿಗೂ (ಔ2) ಸೂರ್ಯನಿಂದ ಪ್ರವಹಿಸುವ ಅತಿನೇರಳೆ ಕಿರಣಗಳಿಗೂ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮ ಈ ಗೋಳ. ಓeóÉೂೀನ್ ಗೋಳದ ಭದ್ರಕವಚ ಸೌರವಿಸರಣೆಯನ್ನು ತಡೆದು ಸೋಸಿ ಬೆಳಕು ಉಷ್ಣ ಮುಂತಾದ ತರಂಗಗಳನ್ನು ಮಾತ್ರ ಒಳಬಿಡುವುದು. ಎಂದರೆ, ಈ ಗೋಳ ಅತಿನೇರಳೆ ತರಂಗಗಳಿಗೆ ಅಪಾರಕ. ಓeóÉೂೀನ್ ಗೋಳದಿಂದ ಮೇಲಕ್ಕೆ ಇರುವ ಅಯಾನ್‍ಗೋಳದಲ್ಲಿ (ನೋಡಿ- ಅಯಾನ್‍ಗೋಳ) ಗಾಳಿಯ ಅಣುಗಳು ಅಯಾನೀಕೃತ ಸ್ಥಿತಿಯಲ್ಲಿರುವುವು. 80 ಕಿ.ಮೀ.ಗಿಂತಲೂ ಎತ್ತರದಲ್ಲಿ ಈ ಪರಿಸ್ಥಿತಿ. ಇದು ಅಯಾನ್ ಮತ್ತು ಓeóÉೂೀನ್ ಗೋಳಗಳು ಒಟ್ಟಾಗಿ ಭೂಮಿಗೆ ತೊಡಿಸಿರುವ ಭದ್ರಕವಚದಂತಿದೆ. ಜೀವಿಗಳಿಗೆ ಅತ್ಯಪಾಯಕಾರಿಗಳಾದ ಅತಿನೇರಳೆ ತರಂಗಗಳನ್ನು ಈ ಕವಚ ತಡೆಹಿಡಿದು ನೀಡುವ ರಕ್ಷಣೆಗೆ ನಾವು ತೆರಬೇಕಾದ ದಂಡ ಆಕಾಶದ ಹಲವಾರು ವಿದ್ಯಮಾನಗಳನ್ನು ಕುರಿತ ನಮ್ಮ ಕುರುಡುತನ. ಈ ಕವಚ ವಿಶ್ವದ ಹಲವಾರು ಭಾಗಗಳನ್ನು ನಮ್ಮಿಂದ ಮುಚ್ಚಿಟ್ಟಿರುವ ಬಾಗಿಲು. ಇದರ ದೆಸೆಯಿಂದ ಸೂರ್ಯನಿಂದ, ಅದರಂತೆಯೇ ಇತರ ಆಕಾಶಕಾಯಗಳಿಂದ, ಭೂಮಿಗೆ ವಿಸರಿತವಾಗುವ ಎಕ್ಸ್‍ಕಿರಣಗಳು ನೆಲವನ್ನು ತಲಪುವುದೇ ಇಲ್ಲ.

	ಎಕ್ಸ್‍ಕಿರಣ ಮನುಷ್ಯನಿದ್ದಲ್ಲಿಗೆ ಬರದಿದ್ದರೆ ಮನುಷ್ಯ ಅಥವಾ ಆತನ ಉಪಕರಣಗಳು ಎಕ್ಸ್‍ಕಿರಣಗಳ ತಡೆಬಾಗಿಲಿನವರೆಗೆ (80 ಕಿ.ಮೀ. ಮತ್ತು ಮೇಲಿನ ಎತ್ತರ) ಹೋಗುವುದೇ ಸೂಕ್ತ ಪರಿಹಾರ. ರಾಕೆಟ್‍ಯಾನ ಆರಂಭವಾಗುವ ಮೊದಲು ಈ ಪ್ರಯೋಗ ಸಾಧ್ಯವಾಗುತ್ತಿರಲಿಲ್ಲ.

	ಆರಂಭ: ಎಕ್ಸ್‍ಕಿರಣ ಖಗೋಳಶಾಸ್ತ್ರದ ಆರಂಭ ತೀರ ಮಸುಕು, ಜರ್ಮನರಿಂದ ವಶಪಡಿಸಿಕೊಂಡ ಗಿ2 ರಾಕೆಟ್ಟಿನಲ್ಲಿ ಒಂದು ಎಕ್ಸ್‍ಕಿರಣ ಕ್ಯಾಮರಾವನ್ನು ಅಳವಡಿಸಿ ಹಾರಿಸಲಾಯಿತು (1948). ಸೂರ್ಯನಿಂದ ವಿದ್ಯುತ್ಕಾಂತ ತರಂಗಗಳು ವಿಸರಿತವಾಗುತ್ತಿವೆ. ಇವುಗಳ ಪೈಕಿ ಎಕ್ಸ್‍ಕಿರಣಗಳು ಮುಂತಾದ ಅತಿನೇರಳೆ ತರಂಗಗಳು ಭೂತಲವನ್ನು ತಲಪುವುದಿಲ್ಲ. ಗಿ2 ರಾಕೆಟ್ಟಿನಲ್ಲಿದ್ದ ಎಕ್ಸ್‍ಕಿರಣ ಕ್ಯಾಮರಾ ಸೌರ ಎಕ್ಸ್‍ಕಿರಣಗಳ ಇರುವನ್ನು ದೃಢೀಕರಿಸಿತು. ನಕ್ಷತ್ರಗಳಿಂದಲೂ ಎಕ್ಸ್‍ಕಿರಣಗಳು ಸರಿತವಾಗುತ್ತಿರಬೇಕು ಎಂಬುದು ತಾರ್ಕಿಕವಾಗಿ ಸಾಧುವಾಗಿದ್ದರೂ ಪ್ರಾಯೋಗಿಕವಾಗಿ ಆ ಕಿರಣಗಳನ್ನು ಸಂಗ್ರಹಿಸಿ ಪರಿಶೀಲಿಸುವ ಸೂಕ್ಷ್ಮಗ್ರಾಹೀ ಉಪಕರಣಗಳು ಸಿದ್ಧವಾಗಿರಲಿಲ್ಲ. ಸೂರ್ಯನಾದ ತರುವಾಯ ಅತಿಸಮೀಪದ ನಕ್ಷತ್ರದ ದೂರವೇ ಸೂರ್ಯದೂರದ ಸುಮಾರು 2,82,000 ಪಾಲಿದೆ. ಹಾಗಿರುವಾಗ ಅತಿ ದೂರದ ಆಕರಗಳಿಂದ ವಿಸರಿತವಾಗಿ ಭೂಮಿಗೆ ತಲುಪುವ ಕಿರಣಗಳು ಅತಿಕ್ಷೀಣವಾಗಿರುವುದು ಸಹಜ. ಇವನ್ನು ಗ್ರಹಿಸುವ ಉಪಕರಣಗಳು ಅತಿಸೂಕ್ಷ್ಮಗ್ರಾಹಿಗಳಾಗಬೇಕಾದದ್ದು ಅನಿವಾರ್ಯ. ಹೀಗಾಗಿ ಆರಂಭದ ವರ್ಷಗಳಲ್ಲಿ ಸೌರ ಎಕ್ಸ್‍ಕಿರಣಗಳ ಅಭ್ಯಾಸವೇ ಮುಂದುವರಿಯಿತು. 1961ರ ಏಪ್ರಿಲ್ 27ರಂದು ಎಕ್ಸ್‍ಪ್ಲೋರರ್ 11 ಹೆಸರಿನ ವೈಜ್ಞಾನಿಕೋಪಗ್ರಹವನ್ನು ಈ ವಿಶಿಷ್ಟ ಉದ್ದೇಶದಿಂದ ಉಡಾಯಿಸಲಾಯಿತು. ಅಂದೇ ಎಕ್ಸ್‍ಕಿರಣ ಖಗೋಳಶಾಸ್ತ್ರ ಅಧಿಕೃತವಾಗಿ ಜನ್ಮತಾಳಿತು. 

	ಜೂನ್ 1962ರಲ್ಲಿ ರಿಕಾರ್ಡೊ ಗಿಯಾಕೋನಿ ಮತ್ತು ಆತನ ಸಂಗಡಿಗರು ನ್ಯೂಮೆಕ್ಸಿಕೋದಿಂದ ಒಂದು ಪುಟ್ಟ ಏರೋಬೀ ರಾಕೆಟ್ಟನ್ನು ಆಕಾಶದ ಎಕ್ಸ್‍ಕಿರಣ ವೀಕ್ಷಣೆಗೋಸ್ಕರ ಉಡಾಯಿಸಿದರು. ಮುಖ್ಯೋದ್ದೇಶ ಚಂದ್ರನಿಂದ ಪ್ರತಿಫಲಿತವಾಗುವ ಪ್ರತಿದೀಪ್ತಶೀಲ (ಫ್ಲೂರಸೆಂಟ್) ವಿಸರಣೆಯ ಅಭ್ಯಾಸ. ಆದರೆ ಈ ಪ್ರಯೋಗದಲ್ಲಿ ಚಂದ್ರನಿಂದ ಪ್ರತಿಫಲಿತವಾಗಿ ಬಂದ ಎಕ್ಸ್‍ಕಿರಣವೇನೂ ದೊರೆಯಲಿಲ್ಲ. ಬದಲು ಆಕಾಶಗಂಗೆಯ (ನೋಡಿ- ಆಕಾಶಗಂಗೆ) ಕೇಂದ್ರ ಬಿಂದುವಿನ ದಿಕ್ಕಿನಿಂದ ಅತ್ಯಾಶ್ಚರ್ಯವೆನಿಸುವಷ್ಟು ಪ್ರಬಲ ಎಕ್ಸ್‍ಕಿರಣ ಸಂಜ್ಞೆಗಳು ದೊರೆತುವು.

	ಏಪ್ರಿಲ್ 1963ರಲ್ಲಿ ಹರ್ಬರ್ಟ್ ಫ್ರೀಡ್‍ಮನ್ ಮತ್ತು ಸಂಗಡಿಗರು ನಡೆಸಿದ ಇನ್ನೊಂದು ರಾಕೆಟ್ ವೀಕ್ಷಣೆಯಲ್ಲಿ ಮೊದಲಿನ ವೀಕ್ಷಣೆಯಲ್ಲಿ ಲಭಿಸಿದ ಸುಳಿವು ಸ್ಥಿರವಾಯಿತು. ಆ ಪ್ರಬಲ ಎಕ್ಸ್‍ಕಿರಣ ಆಕರ ಆಕಾಶಗಂಗೆಯ ಕೇಂದ್ರದಿಂದ ಸುಮಾರು 20ಲಿ ದೂರವಿರುವ ವೃಶ್ಚಿಕ ರಾಶಿಯಲ್ಲಿದೆಯೆಂದು (ಸ್ಕಾರ್ಪಿಯನ್) ನಿರ್ಧರಿಸಿದರು. ಇದರ ಹೆಸರು Sಛಿoಘಿ1. 

ಚಿತ್ರ-1

	ಇದುವರೆಗೆ ಸಹಸ್ರಾರು ನಿರ್ದಿಷ್ಟ ಎಕ್ಸ್‍ಕಿರಣಾಕರಗಳನ್ನು ವಿಶ್ವದ ವಿವಿಧ ಭಾಗಗಳಲ್ಲಿ ಶೋಧಿಸಲಾಗಿದೆ. ಅವುಗಳ ಕೆಲವು ವಿವರಗಳನ್ನು ಪು. 884ರಲ್ಲಿ ಬರೆದಿರುವ ಪಟ್ಟಿಯಲ್ಲಿ ಕೊಟ್ಟಿದೆ. 

	ಎಕ್ಸ್‍ಕಿರಣ ಖಗೋಳಶಾಸ್ತ್ರದಲ್ಲಿ ಅನುಸರಿಸುವ ಮುಖ್ಯ ಘಟ್ಟಗಳು ಆರು.

	1. ಹೊಸ ಆಕರಗಳ ಶೋಧನೆ. ಅವುಗಳ ಸ್ಥಾನಗಳನ್ನೂ ಸಾಮಥ್ರ್ಯಗಳನ್ನೂ ಸರಿಸುಮಾರಾಗಿ ಗುರುತಿಸಬೇಕು. ಒಂದು ಆಕರ ಅದೆಷ್ಟೇ ಸಾಮಥ್ರ್ಯ ಪೂರಿತವಾಗಿರಬಹುದು. ಆದರೆ ಭೂಮಿ ಮತ್ತು ಆಕರದ ನಡುವೆ ಇರುವ ಅಪಾರ ದೂರದ ಪರಿಣಾಮವಾಗಿ ಭೂಮಿಗೆ ದೊರೆಯುವುದು ಅತಿಕ್ಷೀಣ ವಿಸರಣೆ. ಇದನ್ನು ಸಂಗ್ರಹಿಸಿ ವಿಶ್ಲೇಷಿಸಿ ನಿರ್ದಿಷ್ಟ ಆಕರಗಳ ನಿರ್ಣಯ ಮಾಡಬೇಕಾದರೆ ಉಪಕರಣಗಳ ನಿರಂತರ ಸುಧಾರಣೆ ಆಗಬೇಕು.

	2. ಆಕರ ಸ್ಥಾನಗಳ ಖಚಿತ ನಿರ್ಧಾರ. ಎಕ್ಸ್‍ಕಿರಣ ಖಗೋಳಶಾಸ್ತ್ರದಲ್ಲಿ ಆಸಕ್ತರಾಗಿರುವ ವಿವಿಧ ರಾಷ್ಟ್ರಗಳ, ವಿವಿಧ ಕಾಲಗಳ ವಿe್ಞÁನಿಗಳಲ್ಲಿ ವಾಹಕತ್ವವೇರ್ಪಡಲು ಇದು ಅತ್ಯಗತ್ಯ. ಸಾಮಾನ್ಯವಾಗಿ ಒಂದು ಎಕ್ಸ್‍ಕಿರಣಾಕರವನ್ನು ಒಂದು ದೃಗ್ಗೋಚರ ಅಥವಾ ರೇಡಿಯೋ ನಕ್ಷತ್ರದೊಡನೆ ಅಥವಾ ತಿಳಿದಿರುವ ನೆಬ್ಯುಲದೊಡನೆ ಹೊಂದಿಸುವುದು ವಾಡಿಕೆ.

	3. ಆಕರದ ಗಾತ್ರಮಾಪನ : ಅದು ವಿಸ್ತರಿಸಿಕೊಂಡಿದ್ದಲ್ಲಿ ಅದರ ರಚನೆಯ ನಿರ್ಧಾರ ಬಹುತೇಕವಾಗಿ ಎಕ್ಸ್‍ಕಿರಣನಕ್ಷತ್ರಗಳು ಇತರ ನಕ್ಷತ್ರಗಳಂತೆ ಬಿಂದುರೂಪದಲ್ಲಿಯೇ ಇವೆ. ಆದರೆ ಸೂಕ್ಷ್ಮಾಭ್ಯಾಸದಿಂದ ಇವುಗಳ ಗಾತ್ರಗಳನ್ನೂ ವಿಸ್ತಾರಗಳನ್ನೂ ಅಳೆಯಬಹುದು. ಇದರಿಂದ ಎಕ್ಸ್‍ಕಿರಣ ದೃಗ್ಗೋಚರ ನಕ್ಷತ್ರಗಳಿಗಿಂತ ಭಿನ್ನರಚನೆಯವು ಎಂದು ತೀರ್ಮಾನಿಸಲು ಸಾಧ್ಯವಾಗಿದೆ. Sಛಿoಘಿ1ರ ಗಾತ್ರ ಕೋನದ 20 ಸೆಕೆಂಡುಗಳಿಗಿಂತಲೂ ಕಿರಿಯದೆಂದು ಖಿಚಿuಘಿ1ರ ಗಾತ್ರ ಕೋನದ 1-2 ಮಿನಿಟುಗಳಷ್ಟು ಇದೆಯೆಂದೂ ತಿಳಿದಿದೆ. ಇನ್ನು ಎಕ್ಸ್‍ಕಿರಣ ಬ್ರಹ್ಮಾಂಡಗಳ ಗಾತ್ರವಿಸ್ತಾರಗಳನ್ನೂ ನಿರ್ಧರಿಸಬಹುದು.

	4. ಆಕರಗಳಿಂದ ವಿಸರಿತವಾಗುವ ಎಕ್ಸ್‍ಕಿರಣ ಮುಂತಾದ ವಿದ್ಯುತ್ಕಾಂತ ತರಂಗಗಳ ರೋಹಿತದ ಅಭ್ಯಾಸ. ಇದರಿಂದ ನಿರ್ದಿಷ್ಟ ಆಕರಗಳ ವಿಚಾರವಾಗಿಯೂ ಅವುಗಳ ವಿಷಯವಾಗಿಯೂ ವಿವರಗಳು ಲಭಿಸುವುವು.

	5. ಆಕರದ ವಿಸರಣೆಯಲ್ಲಿ ತಲೆದೋರುವ ಏರಿಳಿತಗಳ ಅಭ್ಯಾಸ. ಆಕರದ ಸಾಮಥ್ರ್ಯ, ರಚನೆ, ಚಲನೆಯ ವೇಗ ಮುಂತಾದವುಗಳನ್ನು ಕುರಿತು ಇದು ಹೊಸ ಬೆಳಕು ಬೀರುತ್ತದೆ.

	6. ಎಕ್ಸ್‍ಕಿರಣ ವಿಸರಣೆಯ ಧ್ರುವೀಕರಣದ ಅಭ್ಯಾಸ, ಎಕ್ಸ್‍ಕಿರಣಗಳು ಉಷ್ಣಮೂಲಜನ್ಯವೇ ಅಥವಾ ಆಕರದಲ್ಲಿ ಒಂದು ವಿಧದ ಸಿಂಕ್ರೊಟೋನ್ ಯಂತ್ರ ಕ್ರಿಯೆ ನಡೆಯುತ್ತಿದೆಯೇ ಎಂದು ಈ ಅಭ್ಯಾಸದಿಂದ ತಿಳಿಯಬಹುದು.

	ಇಂದಿನವರೆಗೆ ನಡೆದಿರುವ ಶೋಧನೆಗಳು, ಆಕಾಶಗಂಗೆಯ ವ್ಯಾಪ್ತಿಯಿಂದ ಹೊರಗೆ ಇರುವ ಅಸಂಖ್ಯಾತ ಬ್ರಹ್ಮಾಂಡಗಳಿಂದ ವಿಸರಿತವಾಗಿ ಸಾಮೂಹಿಕವಾಗಿ ಬರುತ್ತಿರುವ ಅಸ್ಪಷ್ಟವಿಸರಣೆಯನ್ನು ಸಂಗ್ರಹಿಸಲಾಗಿದೆ. ನಿರ್ದಿಷ್ಟ ಆಕರಗಳು ಮಾತ್ರವಲ್ಲ. ಹಿನ್ನೆಲೆಯ ಆಕರಗಳಿಂದ ಸಾಮೂಹಿಕವಾಗಿ ವಿಸರಿತವಾಗಿ ಬರುತ್ತಿರುವ ಎಕ್ಸ್‍ಕಿರಣ ವಿಸರಣೆ ವೀಕ್ಷಣಿಗೆ ಹೊಸ ಹಿನ್ನೆಲೆಯನ್ನೂ ಆಯಾಮವನ್ನೂ ಒದಗಿಸಿ ಕೊಟ್ಟಿದೆ.

	ಇದುವರೆಗೆ ತಿಳಿದಿರುವ ಆಕರಗಳಲ್ಲಿ ಹೆಚ್ಚಿನವು ಆಕಾಶಗಂಗೆಯ ಸಮೀಪದಲ್ಲಿಯೇ ಇವೆ. ಆದ್ದರಿಂದ ಅವು ಬಾಹ್ಯ ಬ್ರಹ್ಮಾಂಡಗಳಲ್ಲಿ ಇರದೇ ಸ್ಥಳೀಯ ಬ್ರಹ್ಮಾಂಡವಾದ ಆಕಾಶಗಂಗೆಯಲ್ಲಿಯೇ ಇರಬೇಕೆಂದು ಊಹಿಸಲಾಗಿದೆ. ಉಪಗ್ರಹಗಳಲ್ಲಿ ಅಳವಡಿಸಿದ ಸಂಕೀರ್ಣ ಉಪಕರಣಗಳ ನೆರವಿನಿಂದ ನಡೆಸಿದ ಶೋಧನೆಗಳಿಂದ Seoಘಿ1ರ ಸಾಮಥ್ರ್ಯದ 500ರಲ್ಲಿ 1 ಪಾಲು ಸಾಮಥ್ರ್ಯವಿರುವಂಥ ಅತ್ಯಲ್ಪ ಸಾಮಥ್ರ್ಯ ಆಕರಗಳನ್ನೂ ಶೋಧಿಸಿದ್ದಾರೆ. ವೃಶ್ಚಿಕ ಧನೂರಾಶಿಗಳ ಹಾಗೂ ಸಿಗ್ನಸ್ ನಕ್ಷತ್ರಪುಂಜದ ವಲಯದಲ್ಲಿ ಇವು ನಿಬಿಡವಾಗಿವೆಯೆಂದು ತಿಳಿಯಿತು. ಆಕಾಶಗಂಗೆಯ ಸುರುಳಿಯಾಕಾರದ ಹೊರವಲಯಗಳಲ್ಲಿ ಇವು ಹುದುಗಿಕೊಂಡಿರಬೇಕು. ಆದ್ದರಿಂದ ಇವುಗಳ ದೂರ ಹಲವಾರು ಸಾವಿರ ಜ್ಯೋತಿರ್ವರ್ಷಗಳೇ ಇರಬೇಕೆಂದು ಅಂದಾಜು. ಇಂಥ ಒಂದೊಂದು ಎಕ್ಸ್‍ಕಿರಣ ಆಕರದ ವಿಸರಣದರ 1029-1030W (W = 1ವಾಟು = ಸೆಕೆಂಡಿಗೆ 1 ಜೌಲು ಸಾಮಥ್ರ್ಯ).

	ನಕ್ಷತ್ರ ಪದವನ್ನು	ಸಾಮಾನ್ಯವಾಗಿ ಅತ್ಯುಷ್ಣತೆಯಲ್ಲಿ ದೃಗ್ಗೋಚರ ಬೆಳಕನ್ನು ಬೀರುತ್ತಿರುವ ಅನಿಲ ಹಾಗೂ ಪ್ಲಾಸ್ಮಾರಾಶಿಗೆ ಬಳಸುವುದು ವಾಡಿಕೆ. ಈಗ ಇದರ ಅರ್ಥವನ್ನು ವಿಶಾಲಗೊಳಿಸಿ ರೇಡಿಯೊ ತರಂಗಗಳನ್ನು ವಿಸರಿಸುವ ಆಕರಗಳನ್ನು ರೇಡಿಯೊನಕ್ಷತ್ರಗಳೆಂದೂ ಬೆಳಕನ್ನು ವಿಸರಿಸುವ ಆಕರಗಳನ್ನು ಎಕ್ಸ್‍ಕಿರಣನಕ್ಷತ್ರಗಳೆಂದೂ ಹೆಸರಿಸುತ್ತೇವೆ. ಸಂದರ್ಭ ಸ್ಪಷ್ಟವಾಗಿರುವಾಗ ನಕ್ಷತ್ರವೆಂಬ ಪದವೇ ಆಯಾ ಭಾವನೆಯನ್ನು ಪ್ರತಿನಿಧಿಸುತ್ತದೆ.

	1029-1030W ವಿಸರಣದರವಿರುವ ಆಕರಗಳು ಎಕ್ಸ್‍ಕಿರಣ ನಕ್ಷತ್ರಗಳು. ಅವು ದೃಗ್ಗೋಚರಗಳಲ್ಲ. ನೆಲದಿಂದ 80 ಕಿ.ಮೀ. ಎತ್ತರ ದಾಟಿ ಎಕ್ಸ್‍ಕಿರಣ ಕ್ಯಾಮರಾಗಳ ನೆರವಿನಿಂದ ಈ ನಕ್ಷತ್ರಗಳ ಇರುವನ್ನು ಅರಿಯಬಹುದು. ಆಕಾಶಗಂಗೆಯಲ್ಲಿನ ಎಕ್ಸ್‍ಕಿರಣ ನಕ್ಷತ್ರಗಳು ಸಮಗ್ರವಾಗಿ ವಿಸರಿಸಬಹುದಾದ ವಿಸರಣೆಯನ್ನು ಸಂಖ್ಯಾಶಾಸ್ತ್ರದ ವಿಧಾನಗಳಿಂದ ಅಂದಾಜು ಮಾಡಿದ್ದಾರೆ. ಇದು 1032W ಗಳಷ್ಟಿರಬಹುದು. ವಿಶ್ವದಲ್ಲಿ ಆಕಾಶಗಂಗೆಯಂಥ ಅಸಂಖ್ಯಾತ ಬ್ರಹ್ಮಾಂಡಗಳಿವೆ. ನಮ್ಮ ಸೂರ್ಯನಿರುವ (ಅಂದರೆ ನಾವಿರುವ) ಆಕಾಶಗಂಗೆ ವಿಶ್ವದ ಒಂದು ಪ್ರಧಾನ ಅಥವಾ ಗಮನಾರ್ಹ ಅಂಶವೆಂದೇನೂ ಭಾವಿಸಬೇಕಾಗಿಲ್ಲ. ಆದ್ದರಿಂದ ಇಲ್ಲಿರುವಂಥ ಪರಿಸ್ಥಿತಿಯೇ ಇತರ ಸಕಲ ಬ್ರಹ್ಮಾಂಡಗಳಲ್ಲಿಯೂ ಇದೆಯೆಂದು ಭಾವಿಸುವುದೇ ಸಾಧುವಾದ ಕ್ರಮ. ಇದನ್ನು ಒಪ್ಪಿಕೊಂಡು ವಿಶ್ವದ ಬ್ರಹ್ಮಾಂಡಗಳಿಂದ ಸಮಗ್ರವಾಗಿ ವಿಸರಣೆಯಾಗುತ್ತಿರುವ ಎಕ್ಸ್‍ಕಿರಣಗಳ ಸಾಮಥ್ರ್ಯ 1032W ಗಳೆಂದು ಅಂದಾಜು ಮಾಡಿದ್ದಾರೆ. ಇದು ಬಿಡಿ ಬ್ರಹ್ಮಾಂಡಗಳ ಸಮಗ್ರ ವಿಸರಣೆಗಳ ಮೊತ್ತ. ಪ್ರತ್ಯೇಕವಾಗಿ ವಿಶ್ವದ ಎಕ್ಸ್‍ಕಿರಣಗಳ ವಿಸರಣೆಯನ್ನು ನಿರ್ಧರಿಸಲಾಗಿದೆ (ಹಿಂದೆ ವಿವರಿಸುವ ಸಾಮೂಹಿಕ ಅಸ್ಪಷ್ಟ ವಿಸರಣೆ). ಇವೆರಡನ್ನು ಹೋಲಿಸಿ ನೋಡಿದಾಗ ಮೊದಲಿನದು ಎರಡನೆಯದಕ್ಕಿಂತ ಕಡಿಮೆ ಎಂದು ವೇದ್ಯವಾಯಿತು. ಅಂದರೇನಾಯಿತು? ಇನ್ನಷ್ಟು ಪ್ರಬಲ ಎಕ್ಸ್‍ಕಿರಣಾಕರಗಳು ಬ್ರಹ್ಮಾಂಡಗಳಲ್ಲಿ (ಆದ್ದರಿಂದ ಆಕಾಶಗಂಗೆಯಲ್ಲಿ ಸಹ) ಹರಡಿಹೋಗಿರಬೇಕು, ಅವು ನಮ್ಮ ಗಮನಕ್ಕೆ ಇನ್ನೂ ಬಂದಿಲ್ಲ ಎಂದು ಅರ್ಥವಾಗುವುದು.

	ಈಚೆಗೆ ವೀಕ್ಷಣೆಗಳನ್ನು ಇನ್ನಷ್ಟು ಪರಿಷ್ಕರಿಸಲಾಗಿದೆ. ಒಂದೊಂದು ಆಕರದ ಸ್ಥಾನ, ಸಾಮಥ್ರ್ಯವನ್ನು ನಿಖರವಾಗಿ ನಿರ್ಧರಿಸುವುದರ ಜೊತೆಗೆ ದೃಗ್ಗೋಚರ ನಕ್ಷತ್ರ ಅಥವಾ ನೆಬ್ಯುಲಗಳೊಡನೆ ಈ ಎಕ್ಸ್‍ಕಿರಣನಕ್ಷತ್ರವನ್ನು ಹೊಂದಿಸಬಹುದೇ ಎಂಬ ವಿಚಾರ ಪರಿಶೀಲಿಸಲಾಗಿದೆ.

	ಇಂಥ ಪ್ರಯೋಗಕ್ಕೆ ಒಂದು ಹೊಸ ಆಯಾಮ ಲಬಿಸಿದ್ದು ವೃಷಭರಾಶಿಯಲ್ಲಿ ಗುರುತಿಸಿರುವ ಖಿಚಿuಘಿ1 ಎಂಬ ಹೆಸರಿನ ಎಕ್ಸ್‍ಕಿರಣನಕ್ಷತ್ರದ ವೀಕ್ಷಣೆಯಿಂದ, ವೃಷಭರಾಶಿಯ ಹಿನ್ನೆಲೆಯಲ್ಲಿ ಟೆಲಿಸ್ಕೋಪಿನಿಂದ ಕಾಣುವ ನಳ್ಳಿ ಆಕಾರದ ಒಂದು ನೆಬ್ಯುಲವಿದೆ. ಆದ್ದರಿಂದ ಅದರ ಹೆಸರು ಕ್ರ್ಯಾಬ್ ನೆಬ್ಯುಲ. ಇದು ಒಂದು ಎಕ್ಸ್‍ಕಿರಣ ವಿಸರಣೆಯ ಆಕರ ಎಂದು ಮೊದಲೇ ತಿಳಿದಿತ್ತು. ಕೇವಲ ನೆಬ್ಯುಲವೇ ಇಷ್ಟು ಸಾಮಥ್ರ್ಯವಿರುವ ಎಕ್ಸ್‍ಕಿರಣಗಳನ್ನು ವಿಸರಣೆ ಮಾಡಲಾರದು : ಆದ್ದರಿಂದ ಆ ಆಕರ ನೆಬ್ಯುಲದಲ್ಲಿ ಹುದುಗಿಕೊಂಡಿರಬೇಕು ಎಂದು ತರ್ಕಿಸಿದರು. ಇನ್ನು ಈ ಆಕರ ಭೂಮಿಯಿಂದ ವೀಕ್ಷಿಸುವಂತೆ ಒಂದು ಬಿಂದು ರೂಪದಲ್ಲಿದೆಯೇ ಅಥವಾ ಅದಕ್ಕೆ ಗಮನಾರ್ಹ ಗಾತ್ರವಿದೆಯೇ ಎಂದು ನಿರ್ಧರಿಸುವುದು ಸಾಧ್ಯವಾದರೆ ಆಕರದ ಭೌತಲಕ್ಷಣಗಳನ್ನು ಸುಮಾರಾಗಿ ನಿರೂಪಿಸಬಹುದು. ಚಂದ್ರಬಿಂಬದ ಕಕ್ಷೆ ನಿಖರವಾಗಿ ತಿಳಿದಿದೆ : ಆದ್ದರಿಂದ ಯಾವಾಗ ಕ್ರ್ಯಾಬ್ ನೆಬ್ಯುಲವನ್ನು ಚಂದ್ರ ಸಂಕ್ರಮಿಸುವುದು ಎಂದು ಮೊದಲೇ ನಿರ್ಧರಿಸಲಾಯಿತು. 1964ರ ಜುಲೈ 7ರಂದು ಆ ಮುಹೂರ್ತ ಪ್ರಾಪ್ತವಾದಾಗ ಕ್ರ್ಯಾಬ್‍ನೆಬ್ಯುಲದಿಂದ ವಿಸರಿತವಾಗುವ ಎಕ್ಸ್‍ಕಿರಣಗಳಲ್ಲಿ ಉಂಟಾದ ಏರಿಳಿತಗಳನ್ನು ಅಳೆದರು. ಚಂದ್ರಬಿಂಬ ಕ್ರ್ಯಾಬ್‍ನೆಬ್ಯುಲವನ್ನು ಅಡ್ಡಹಾಯ್ದಂತೆ ವಿಸರಣೆ ಕ್ರಮೇಣ ಮಾಸಿ ಮಸಕಾಗಿ ಪುನಃ ಮೊದಲಿನ ಮಟ್ಟಕ್ಕೇ ಮರಳಿತು. ಆಕರ ಬಿಂದುರೂಪದಲ್ಲಿದ್ದಿದ್ದರೆ ಚಂದ್ರಬಿಂಬ ನೆಬ್ಯುಲವನ್ನು ಸಂಕ್ರಮಿಸುತ್ತಿದ್ದಾಗ ವಿಸರಣೆ ಹಠಾತ್ತಾಗಿ ನಿಂತುಹೋಗಬೇಕಾಗಿತ್ತು ; ಹೀಗಾಗಲಿಲ್ಲ. ಆದ್ದರಿಂದ ಅದು ಬಿಂದುರೂಪದಲ್ಲಿಲ್ಲ ; ಆಕರಕ್ಕೆ ಗಮನಾರ್ಹ ಗಾತ್ರವಿದೆಯೆಂದು ತರ್ಕಿಸಿದರು. ಈ ಗಾತ್ರ ಕೋನದ 1-2 ಮಿನಿಟ್ (ನೆಬ್ಯುಲ ನಮಗೆ ಕಾಣುವ ಗಾತ್ರದ 1/3ರಷ್ಟು)ಎಂದೂ ತಿಳಿಯಿತು. ಭೂಮಿಯಿಂದ ಕ್ರ್ಯಾಬ್ ನೆಬ್ಯುಲದ ದೂರ 6,000 ಜ್ಯೋತಿರ್ವರ್ಷವೆಂದು ಅಂದಾಜು.

	ಕ್ರ್ಯಾಬ್ ನೆಬ್ಯುಲವನ್ನು ಕುರಿತು ಒಂದು ವಿವರಣೆ ಇಲ್ಲಿ ಅಪ್ರಸ್ತುತವಾಗದು. ಹಳೆಯ ಚೀನೀ ವರದಿಗಳ ಪ್ರಕಾರ 1054ರ ಜುಲೈ 4ರಂದು ಒಂದು ಅಪೂರ್ವ ನಕ್ಷತ್ರ ವೃಷಭರಾಶಿಯಲ್ಲಿ ಕಾಣಿಸಿಕೊಂಡಿತು. ಸುಮಾರು ಒಂದು ವರ್ಷದ ತರುವಾಯ ಇದು ಕ್ರಮೇಣ ಮಾಸಿ ಮಾಯವಾಯಿತು; ಈ ದಾಖಲೆ ಸೂಚಿಸಿದ ಪ್ರದೇಶದಲ್ಲಿ ಇಂದಿನ ಸೂಕ್ಷೋಪಕರಣಗಳು ಕ್ರ್ಯಾಬ್ ನೆಬ್ಯುಲವನ್ನು ಗುರುತಿಸಿವೆ. ಅಂದು ಒಂದು ನಕ್ಷತ್ರ ನೋವ ಅಥವಾ ಮಹಾನೋವ ಆಗಿ ಆಸ್ಫೋಟಿಸಿರಬೇಕು; ಆದ್ದರಿಂದ ಅದರ ಬೆಳಕು ಫಕ್ಕನೆ ತೀವ್ರವಾಗಿ ಚೀನೀ ವೀಕ್ಷಕರಿಗೆ ಅಪೂರ್ವ ನಕ್ಷತ್ರದ ದರ್ಶನವಾಯಿತು. ಆ ನೋವ ನಕ್ಷತ್ರದ ಅವಶೇಷವೇ ಕ್ರ್ಯಾಬ್ ನೆಬ್ಯುಲ ಎಂದು ತೀರ್ಮಾನಿಸಿದ್ದಾರೆ. ನೆಬ್ಯುಲದ ವ್ಯಾಸ ಸುಮಾರು 3 ಜ್ಯೋತಿರ್ವರ್ಷಗಳು. ಸೆಕೆಂಡಿಗೆ 1,000 ಮೈಲುಗಳಂತೆ ಅದು ಹಿಗ್ಗುತ್ತಿದೆ. ನೆಬ್ಯುಲದ ಕೇಂದ್ರದಲ್ಲಿ ಒಂದು ಕ್ಷೀಣ ಅಸ್ಪಷ್ಟ ನಕ್ಷತ್ರವಿದೆಯೆಂದು ತಿಳಿದಿದೆ. ಅಂದು ಒಡೆದು ನೋವಾನಕ್ಷತ್ರವಾಗಿ ಬೆಳಕು ಬೀರಿದ ಆಕಾಶಕಾಯದ ಕಠಿಣ ತಿರುಳು ಇದಾಗಿರಬಹುದು. ಈ ನಕ್ಷತ್ರದ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಯ ಸುಮಾರು 1.25ರಷ್ಟಿದೆ. ಇದನ್ನು ಆವರಿಸಿರುವ ಕ್ರ್ಯಾಬ್ ನೆಬ್ಯುಲದ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಯ 10% ಮಾತ್ರವಿದೆ. ಆದ್ದರಿಂದ ನಕ್ಷತ್ರದಲ್ಲಿ ದ್ರವ್ಯ ಬಲುಸಾಂದ್ರವಾಗಿ ಸಂಚಯನಗೊಂಡಿರಬೇಕು. ಇದೇ ಎಕ್ಸ್‍ಕಿರಣಗಳ (ಖಿಚಿu ಘಿI) ಆಕರವೇ ಎನ್ನುವ ವಿಚಾರದಲ್ಲಿ ಖಚಿತವಾದ ಉತ್ತರ ನೀಡಲು ಸಾಧ್ಯವಾಗಿಲ್ಲ. ಎಕ್ಸ್‍ಕಿರಣಗಳ ಆಕರಗಳನ್ನು ಕುರಿತ ಮೂರು ಬೇರೆ ಬೇರೆ ಊಹೆಗಳನ್ನು ಇದುವರೆಗೂ ಲಭಿಸಿರುವ ಪುರಾವೆಗಳನ್ನು ಆಧರಿಸಿ ಮುಂದಿಡಲಾಗಿದೆ.

	1. ನ್ಯೂಟ್ರಾನ್ ನಕ್ಷತ್ರಗಳಿಂದ ಇವು ವಿಸರಿತವಾಗುತ್ತವೆ. (ಅತ್ಯಂತ ಸಾಂದ್ರವಾಗಿ ಪೇರಿಸಲ್ಪಟ್ಟ ನ್ಯೂಟ್ರಾನುಗಳ ಸಮುದಾಯವೇ ನ್ಯೂಟ್ರಾನ್ ನಕ್ಷತ್ರ. ಇಂಥ ಒಂದು ನಕ್ಷತ್ರದ ಘನ ಇಂಚಿನ ತೂಕ ಸುಮಾರು 109ಟನ್. ಇದರ ಹೊರಮೈ ಉಷ್ಣತೆ 107ಲಿ ಕೆ ಗಿಂತಲೂ ಹೆಚ್ಚು). ಬಲು ಹೆಚ್ಚಿನ ಉಷ್ಣತೆಯಲ್ಲಿರುವ ಈ ನಕ್ಷತ್ರಗಳು ಎಕ್ಸ್‍ಕಿರಣಗಳಿಗಿಂತ ಹೆಚ್ಚಿನ (ದೀರ್ಘತರ) ವಿದ್ಯುತ್ಕಾಂತ ತರಂಗಗಳನ್ನು ವಿಸರಿಸುವುದೇ ಇಲ್ಲ. ಈ ಊಹೆ ಅಷ್ಟೊಂದು ಸಮರ್ಪಕವಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಒಂದು ನ್ಯೂಟ್ರಾನ್ ನಕ್ಷತ್ರ ಬಲು ಬೇಗ ಉಷ್ಣ ಕಳೆದುಕೊಂಡು ನಾಶವಾಗಿ ಹೋಗುವುದು. ಆದ್ದರಿಂದ ಇದುವರೆಗೆ ಗಮನಿಸಿರುವಷ್ಟು ದೀರ್ಘಕಾಲದ ಎಕ್ಸ್‍ಕಿರಣ ವಿಸರಣೆ ಒಂದು ನ್ಯೂಟ್ರಾನ್ ನಕ್ಷತ್ರದಿಂದ ಸಾಧ್ಯವಾಗದು.

	2. 108ಲಿ ಕೆ. ಉಷ್ಣತೆಯಲ್ಲಿರುವ ಅಯಾನೀಕೃತ ಅನಿಲದಲ್ಲಿ ಎಲೆಕ್ಟ್ರಾನುಗಳು ಪ್ರೋಟಾನುಗಳಿಗಿಂತ 40 ಪಾಲು ಅಧಿಕವೇಗದಲ್ಲಿ ಚಲಿಸುತ್ತವೆ. ಇಂಥ ಯಾದೃಚ್ಛಿಕ ಚಲನೆಗಳಲ್ಲಿ ಪ್ರೋಟಾನುಗಳ ಸಮೀಪ ಹಾಯುವಾಗಲೆಲ್ಲ ಎಲೆಕ್ಟ್ರಾನುಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಈ ಶಕ್ತಿ ಎಕ್ಸ್‍ಕಿರಣಗಳ ರೂಪದಲ್ಲಿ ವಿಸರಿತವಾಗುವುದು.

	3. ಕಾಂತಬಲದ ಒಂದು ರೇಖೆಯನ್ನು (ಲೈನ್ ಆಫ್ ಮ್ಯಾಗ್ನೆಟಿಕ್ ಫೋರ್ಸ್) ಎಲೆಕ್ಟ್ರಾನ್ ಸುರುಳಿಸುತ್ತುತ್ತ ಚಲಿಸುತ್ತದೆ. ಈ ಚಲನೆಯಲ್ಲಿ ಅದು ಕಳೆದುಕೊಳ್ಳುವ ಶಕ್ತಿ ಎಕ್ಸ್‍ಕಿರಣಗಳಾಗಿ ವಿಸರಿತವಾಗುತ್ತದೆ.

ಕ್ರಮಸಂಖ್ಯೆ
ಆಕರದ ಹೆಸರು
ನಕ್ಷತ್ರಪುಂಜದ ಹೆಸರು
ವಿಷುವದಂಶ (ರೈಟ್ ಅಸೆನ್ಷನ್) 1950
ಗಂ.  ಮಿ.
ಘಂಟಾ ವೃತ್ತಾಂಶ (ಡೆಕ್ಲಿನೇಷನ್)
1950
0  `

ಗುರುತು

1
ಖಿಚಿuಘಿ1
ವೃಷಭ
5  31.5
+21 59
ಕ್ರೇಬ್ ನೆಬ್ಯುಲ ಮಹಾ ನೋವಾದ ಅವಶೇಷ

2
ಗಿiಡಿಘಿ1
ಕನ್ಯಾ
 12  30.7
 +12 30
ರೇಡಿಯೊ ಬ್ರಹ್ಮಾಂಡ

3
ಅeಟಿಘಿ2
ಸೆಂಟಾರಸ್
 13  09.6
 -63 08
ನಕ್ಷತ್ರ

4
Sಛಿoಘಿ1
ವೃಶ್ಚಿಕ
 16  17.0
 -15 31
ನಕ್ಷತ್ರ

5
Sಛಿoಘಿ3
ವೃಶ್ಚಿಕ
 17  12.0
 -36 00
---

6
Sgಡಿಘಿ3
ಧನು
 17  42.7
 -26 10
ನಕ್ಷತ್ರ ?  

7
Sgಡಿಘಿ1
ಧನು
 17  58.6
 -25 00
---

8
Sgಡಿಘಿ4
ಧನು
 17  59.7
 -20 32
---

9
Sgಡಿಘಿ2
ಧನು
 18  10.7 
 -17 00 
---

10
Seಡಿಘಿ2
ಸರ್ಪೆನ್ಸ್‍ಕೌಡ
 18  12.7 
 -13 48
---

11
ಅಥಿgಘಿ1
ಸಿಗ್ನಸ್
 19  56.6
 +35 06
---

12
ಅಥಿgಘಿ4
ಸಿಗ್ನಸ್
 21  09.2
 +38 33
---

13
ಅಥಿgಘಿ2
ಸಿಗ್ನಸ್
 21  42.6
 +38 05
ನಕ್ಷತ್ರ

14
ಅಚಿsಘಿ1
ಕೆಶ್ಯಿಯೋಪಿಯ
23  21.2
+58 32
ಮಹಾ ನೋವಾದ ಅವಶೇಷ

15
ಗಿeಟಘಿ1
ವೇಲ
 8  67.0
 -41 12
---

16
ಐuಠಿಘಿ1
ಲೂಪಸ್
 15  02.0
 -52 00
---

17
ಓoಡಿಘಿ1
ನಾರ್ಮ
 15  42.0
 -57 30
---

18
Sಛಿoಘಿ2
ವೃಶ್ಚಿಕ
16  53.0
-40 00
Sಛಿoಘಿ3 ಇದೂ ಒಂದೇ ಆಗಿರಬಹುದೆಂಬ ಸಂದೇಹವಿದೆ

19
ಂಡಿಚಿಘಿ1
ಅರ
 16  54.0
 -46 00
---

20
Sಛಿoಘಿ4
ವೃಶ್ಚಿಕ
 17  40.0
 -35 00
---

21
Sgಡಿಘಿ5
ಧನು
 17  48.0
 -30 00
---

22
Seಡಿಘಿ1
ಸಪ್ರ್ಪೆನ್ಸ್ ಕಾಪುಟ್
 18  44.0
 +6 00
---

23
ಅeಠಿಘಿ1
ಸಿಫಿಯಸ್
 0  15.0 
 +66 00 
---

24
ಐeoಘಿಖ1
ಸಿಂಹ
 9  35.0
 +9 36
---

25
ಅeಟಿಘಿಖ3
ಸೆಂಟಾರಸ್
 11  23.0
 -59 00
---

26
ಅeಟಿಘಿಖ1
ಸೆಂಟಾರಸ್
 14  28.0
 -63 00
---

27
ಓoಡಿಘಿಖ1
ನಾರ್ಮ
 16  24.0
 -51 00
---

28
Sಛಿoಘಿಖ4
ವೃಶ್ಚಿಕ
 16  25.0
 -40 00
---

29
ಐ7
___
 16  42.0
 -31 54
---

30
ಐs
___
 17  01.0
 -30 30
---

31
ಔಠಿhಘಿಖ2
ಒಫಿಯೂಚಸ್
 17  14.0
 -23 00
---

32
Sಛಿoಘಿಖ3
ವೃಶ್ಚಿಕ
 17  23.0
 -44 00
---

33
ಉಘಿ9+9
___
 17  30.0
 -16 36 
---

34
ಔಠಿhಘಿಖ1
ಒಫಿಯೂಚಸ್
 17  32.0
 -21 00
---

35
Sಛಿoಘಿಖ5
ವೃಶ್ಚಿಕ
 17  37.0
 -40 00 
---

36
Sಛಿoಘಿಖ6
ವೃಶ್ಚಿಕ
 18  07.0
 -36 00
---

37
ಐಥಿಡಿಘಿಖ1
ಲೈರಾ
 18  10.0
 +36 00
---

38
Sgಡಿಘಿಖ5
ಧನು
 18  26.0
 +31 00
---

39
ಂqಟಘಿಖ1
ಏಕ್ವಿಲಾ
 19  12.0
 0 00
---

40
ಅಥಿgಘಿಖ3
ಸಿಗ್ನಸ್
 19  58.0
 +40 24
---

41
ಅಥಿgಘಿ3
ಸಿಗ್ನಸ್
 20  31.0
 +40 54
---

42
ಗಿuಟಘಿಖ1
ವಲ್ಪೆಕುಲ
 20  38.0
 +29 00
---

43
ಐಚಿಛಿಘಿಖ1
ಲ್ಯಾಸೆರ್ಟ
 22  34.0
 +53 48
---

44
ಅeಠಿಘಿಖ2
ಸಿಫಿಯಸ್
 22  42.0
 +62 00
---

45
ಅeಠಿಘಿಖ3
ಸಿಫಿಯಸ್
 23  54.0
 +72 54
---

ಎರಡನೆಯ ಮತ್ತು ಮೂರನೆಯ ಊಹೆಗಳು ಒಂದು ದೃಷ್ಟಿಯಿಂದ ಸಮಸ್ಯೆಗೆ ಪರಿಹಾರ ಒದಗಿಸಿದರೆ ಇನ್ನೊಂದು ದೃಷ್ಟಿಯಿಂದ ಹೊಸ ಸಮಸ್ಯೆಗಳನ್ನು ಸೃಷ್ಟಿಸಿವೆ. ಪ್ರಬಲ ಎಕ್ಸ್‍ಕಿರಣಗಳು ದೃಗ್ಗೋಚರ ಮೂಲಗಳಿಂದ ವಿಸರಿತವಾಗುತ್ತಿಲ್ಲವೆಂದು ಮಾತ್ರ ದೃಢವಾಗಿದೆ. 

ಚಿತ್ರ-2

ಚಿತ್ರ-3

ಇನ್ನೂ ಒಂದು ಊಹೆಯನ್ನು ಫಿಲಿಫ್ ಮಾರಿಸನ್ ಮತ್ತು ಲೂಯ್ಗಿ ಸರ್ಟೋರಿ ಎಂಬುವರು ಮುಂದಿಟ್ಟಿದ್ದಾರೆ ; ಮಹಾನೋವಾ ನಕ್ಷತ್ರದ ಅವಶೇಷಗಳೇ ಎಕ್ಸ್‍ಕಿರಣಗಳ ಆಕರಗಳು ; ಇಂಥ ಒಂದು ನಕ್ಷತ್ರದ ಆಸ್ಫೋಟನೆಯಲ್ಲಿ ಉತ್ಪನ್ನವಾಗುವ ಬಲುಪಾಲು ಶಕ್ತಿ ಅಂತಿಮವಾಗಿ ಉಷ್ಣರೂಪಕ್ಕೆ ಪರಿವರ್ತಿತವಾಗಬೇಕು ; ಇದರಿಂದ ಎಕ್ಸ್‍ಕಿರಣಗಳ ವಿಸರಣೆಗೆ ಅವಶ್ಯವಾಗುವ 108ಲಿ-109ಲಿ ಏ. ಉಷ್ಣತೆ ಉಂಟಾಗುವುದು. ಖಿಚಿuಘಿ1ನ್ನು ಕುರಿತು ನಡೆಸಿದ ಪ್ರಯೋಗಗಳು ಈ ಊಹೆಯನ್ನು ಸಮರ್ಥಿಸಲಿಲ್ಲ.

ಭೌತವಾಗಿ ಅವು ಏನೇ ಆಗಿರಲಿ, ಅಂತೂ ಎಕ್ಸ್‍ಕಿರಣ ನಕ್ಷತ್ರಗಳು ಒಂದು ವಿಶಿಷ್ಟ ಜಾತಿಗೆ ಸೇರಿದ ಆಕಾಶಕಾಯಗಳು. ನಮ್ಮ ಸಮೀಪದ ಎಕ್ಸ್‍ಕಿರಣ ಆಕಾರವಾದ ಸೂರ್ಯನೊಡನೆ (ದೃಗ್ಗೋಚರ ನಕ್ಷತ್ರ) ಹೋಲಿಸುವಾಗ ಇವು ಗಮನಾರ್ಹವಾಗಿ ಭಿನ್ನವಾಗಿವೆ. ಇವು ವಿಸರಿಸುವ ಎಕ್ಸ್‍ಕಿರಣಗಳ ರೋಹಿತಗಳಿಂದ ಈ ಕಿರಣಗಳು ಉಷ್ಣಮೂಲ ಜನ್ಯವೆಂದು ತಿಳಿದಿದೆ. ಸರಾಸರಿ 1.5ಘಿ106ಲಿ-2ಘಿ106ಲಿ ಕೆ ಉಷ್ಣತೆಯಲ್ಲಿರುವ ಸೌರ ಕಿರೀಟದಿಂದ (ಕೂರೋನ) ವಿಸರಿತವಾಗುವ ಎಕ್ಸ್‍ಕಿರಣಗಳ ಮೊತ್ತ ಸಮಗ್ರವಾಗಿ ವಿಸರಿತವಾಗುವ ಸೌರಶಕ್ತಿಯ ಕೇವಲ 10-6ಅಂಶದಷ್ಟು. ಆದರೆ Sಛಿoಘಿ1ರ ವಿವರಗಳ ಪ್ರಕಾರ ಅದರ ಉಷ್ಣತೆ ಸೂರ್ಯನ ಉಷ್ಣತೆಯ 50ರಷ್ಟು ಹೆಚ್ಚು; ಮತ್ತು ಈ ಎಕ್ಸ್‍ಕಿರಣ ನಕ್ಷತ್ರದ ಸಮಗ್ರ ವಿಸರಣೆಯ 99% ಭಾಗವೂ ಎಕ್ಸ್‍ಕಿರಣಗಳೇ. ಈ ಅಂಶಗಳನ್ನು ಗಮನಿಸಿದ ವಿe್ಞÁನಿಗಳು ಇನ್ನೊಂದು ಊಹೆಯನ್ನು ಮಂಡಿಸಿದ್ದಾರೆ. ಎಕ್ಸ್‍ಕಿರಣ ಆಕರ ಒಂದು ಯಮಳ ನಕ್ಷತ್ರ ವ್ಯವಸ್ಥೆ. ಇವುಗಳಲ್ಲಿ ಒಂದು ಸೂರ್ಯನಂಥ ಸಾಮಾನ್ಯ ನಕ್ಷತ್ರ ; ಇನ್ನೊಂದು ನ್ಯೂಟ್ರಾನ್ ನಕ್ಷತ್ರ. ಇದು ಗಾತ್ರದಲ್ಲಿ ಕಿರಿಯದು; ಅದರ ದ್ರವ್ಯರಾಶಿ, ಸಾಂದ್ರತೆ, ಉಷ್ಣತೆ, ಅದರಿಂದ ವಿಸರಿತವಾಗುವ ಬೆಳಕು ಎಲ್ಲವೂ ಬಲು ಹೆಚ್ಚು. ಇಂಥ ಒಂದು ಯಮಳ ವ್ಯವಸ್ಥೆ ಪರಸ್ಪರ ಪರಿಭ್ರಮಿಸುವಾಗ ಸಾಧಾರಣ ನಕ್ಷತ್ರದಿಂದ ನ್ಯೂಟ್ರಾನ್ ನಕ್ಷತ್ರ. ಅನಿಲವನ್ನು ತನ್ನೆಡೆಗೆ ಸೆಳೆದುಬಿಡುತ್ತದೆ. ಇದು ಅದರ ಸುತ್ತಲೂ ಸುರುಳಿಸುತ್ತುವ ಒಂದು ಅನಿಲ ಕವಚವಾಗುವುದು. ಇಂಥ ಕವಚದ ಒಳಮೈ ಅದರ ತೀವ್ರ ಉಷ್ಣತೆಯೊಡನೆ ನೇರ ಸಂಪರ್ಕಕ್ಕೆ ಬರುತ್ತದೆ. ಈ ಭಾಗದಲ್ಲಿ ಎಕ್ಸ್‍ಕಿರಣಗಳು ಉತ್ಪನ್ನವಾಗುತ್ತವೆ. ಕವಚದ ಹೊರವಲಯ ದೃಗ್ಗೋಚರ ಬೆಳಕನ್ನು ಬೀರುತ್ತದೆ. ಪ್ರಾಯೋಗಿಕವಾಗಿ ಇಂಥ ಒಂದು ಮಾದರಿಗೆ ಅಥವಾ ಊಹೆಗೆ ಅನೇಕ ಉದಾಹರಣೆಗಳು ಲಭ್ಯವಾಗಿವೆ.

ಚಿತ್ರ-4

1967ರಿಂದ ಈಚೆಗೆ ಖಿಚಿuಘಿ1 ಮತ್ತು Sಛಿoಘಿ1 ಇವುಗಳಿಗಿಂತ ಭಿನ್ನವಾದ ಎರಡು ಆಕರಗಳನ್ನು ಶೋಧಿಸಲಾಗಿದೆ. Sಛಿoಘಿ1ಕ್ಕಿಂತ ಸೆಂಟಾರಸ್ ಪುಂಜದಲ್ಲಿ ಗುರುತಿಸಿದ. ಅeಟಿಘಿ2 ಅದೆಷ್ಟೊ ಹೆಚ್ಚು ಸಾಮಥ್ರ್ಯಪೂರಿತವಾಗಿತ್ತು. ಈ ಶೋಧನೆ ಏಪ್ರಿಲ್ 1967ರಲ್ಲಿ ನಡೆಯಿತು. ಆದರೆ ಆರು ವಾರಗಳ ತರುವಾಯ ನಡೆಸಿದ ಶೋಧನೆಯಲ್ಲಿ ಅದೇ ಆಕರದ (ಅeಟಿಘಿ2) ಸಾಮಥ್ರ್ಯ 6 ಅಂಶಗಳಷ್ಟು ಕಡಿಮೆಯಾಗಿ ಹೋಗಿತ್ತು. ಮುಂದಿನ ಸೆಪ್ಟೆಂಬರಿನಲ್ಲಿ ಶೋಧನೆ ನಡೆಸಿದಾಗ ಈ ಆಕರವನ್ನು ಗುರತಿಸಲೇ ಆಗಲಿಲ್ಲ. ಅಂದರೆ ಏಪ್ರಿಲಿನಲ್ಲಿ ಇದ್ದ ಸಾಮಥ್ರ್ಯದ 100 ಅಂಶಗಳಿಗಿಂತಲೂ ಹೆಚ್ಚಾಗಿ ಅeಟಿಘಿ2ರ ಸಾಮಥ್ರ್ಯ ತಗ್ಗಿತ್ತು ಎಂದಾಯಿತು. ಆರು ತಿಂಗಳುಗಳ ಕ್ಷಿಪ್ರ ಅವಧಿಯಲ್ಲಿ ಇಂಥ ತೀವ್ರ ವ್ಯತ್ಯಾಸವನ್ನು ಪ್ರದರ್ಶಿಸಿದ ಬೇರೆ ಎಕ್ಸ್‍ಕಿರಣ ನಕ್ಷತ್ರಗಳು ತಿಳಿದಿರಲಿಲ್ಲ. ಮುಂದೆ ನವೆಂಬರ್ 1968ರಲ್ಲಿ ಭಾರತದಿಂದ ಉಡಾಯಿಸಿದ ರಾಕೆಟ್‍ಕ್ಯಾಮರಾಗಳು ಇದೇ ಆಕರವನ್ನು ಪುನಃ ಗುರುತಿಸಿವೆ. ನೋವ ನಕ್ಷತ್ರಗಳ ಏರಿಳಿತಗಳಿಗೆ ಇಂಥ ಆಕರಗಳನ್ನು ಹೋಲಿಸಿ ಇದನ್ನು ಎಕ್ಸ್‍ಕಿರಣ ನೋವನಕ್ಷತ್ರ ಎಂದು ಕರೆಯಲಾಗಿದೆ. ಸೆಂಟಾರಸ್-ಲೂಪಸ್ ಪುಂಜಗಳ ಗಡಿಯಲ್ಲಿ 1969ರ ಬೇಸಗೆಯಲ್ಲಿ ಇನ್ನೊಂದು ಎಕ್ಸ್‍ಕಿರಣ ನೋವವನ್ನು ಶೋಧಿಸಿದ್ದಾರೆ. ಜುಲೈನಲ್ಲಿ ಮೊದಲು ಕಂಡ ಈ ಆಕರ Sಛಿoಘಿ1ರ ಎರಡರಷ್ಟು ಸಾಮಥ್ರ್ಯವನ್ನು ಮುಂದಿನ ದಿವಸಗಳಲ್ಲಿ ಪ್ರದರ್ಶಿಸಿ ಅಕ್ಟೋಬರ್ ಹೊತ್ತಿಗೆ ಕಾಣದಾಯಿತು. ಮೂರು ವರ್ಷಗಳ ಕ್ಷಿಪ್ರಾವಧಿಯಲ್ಲಿ ಇಂಥ ಎರಡು ವೈಪರೀತ್ಯಗಳ ಶೋಧನೆಯನ್ನು ಗಮನಿಸಿ ಎಕ್ಸ್‍ಕಿರಣ ನೋವನಕ್ಷತ್ರಗಳು ವಿಶ್ವದ ಸಾಮಾನ್ಯ ವಿದ್ಯಮಾನವೇ ಆಗಿರಲಾರದೇ ಎಂಬ ಸಂದೇಹವನ್ನು ಮಂಡಿಸಲಾಗಿದೆ. ಈ ದಾರಿಯಲ್ಲಿನ ಶೋಧನೆ ಒಂದು ನಕ್ಷತ್ರದ ವಿಕಾಸದ ಹಾದಿಯಲ್ಲಿರುವ (ಸೂರ್ಯನಂಥ ಸಾಮಾನ್ಯ ನಕ್ಷತ್ರ- ರಕ್ತದೈತ್ಯನಕ್ಷತ್ರ-ಶ್ವೇತಕುಬ್ಜ ನಕ್ಷತ್ರ-ನೋವ ಮಹಾನೋವ ನಕ್ಷತ್ರ) ಹಲವಾರು ಕೊರೆಗಳಲ್ಲಿ ಕೆಲವನ್ನಾದರೂ ತುಂಬಬಹುದು ಎಂದು ಖಗೋಳವಿe್ಞÁನಿಗಳ ನಂಬಿಕೆ.

ಈಚೆಗೆ ಒಂದು ಎಕ್ಸ್‍ಕಿರಣ ಬ್ರಹ್ಮಾಂಡವನ್ನೇ (ಎಕ್ಸ್‍ರೇ ಗ್ಯಾಲಾಕ್ಸಿ) ಶೋಧಿಸಲಾಗಿದೆ. ಎಕ್ಸ್‍ಕಿರಣ ಖಗೋಳಶಾಸ್ತ್ರದಲ್ಲಿ ಈ ಶೋಧನೆ ಅತ್ಯಂತ ಮಹತ್ತ್ವಪೂರ್ಣವಾದದ್ದು. ಕನ್ಯಾರಾಶಿಯ ದಿಕ್ಕಿನಲ್ಲಿರುವ ಈ ಆಕರವನ್ನು 1965ರ ಅನಂತರ ಪದೇ ಪದೇ ವಿಶೇಷ ಸೂಕ್ಷ್ಮೊ ಪಕರಣಗಳ ನೆರವಿನಿಂದ ಶೋಧಿಸಿ ವಿವರಗಳನ್ನು ಸಂಗ್ರಹಿಸಲಾಗಿದೆ. ಇದರಿಂದ ಬರುವ ಎಕ್ಸ್‍ಕಿರಣ ಸಂಜ್ಞೆ ಬಲು ದುರ್ಬಲ- Sಛಿoಘಿ1ರ 200 ಅಂಶಗಳಲ್ಲಿ 1 ಮಾತ್ರ. ಆದರೆ ಈ ಆಕರದ ದೂರ 5ಘಿ107 ಜ್ಯೋತಿರ್ವರ್ಷ (Sಛಿoಘಿ1ರ ದೂರ 300-1,000 ಜ್ಯೋತಿರ್ವರ್ಷ). ಆದ್ದರಿಂದ ಇದರ ಎಕ್ಸ್‍ಕಿರಣ ಸಾಮಥ್ರ್ಯ 1036Wಗಳೆಂದು ಅಂದಾಜು ಮಾಡಲಾಗಿದೆ. ಇದು ಅದೇ ಆಕರದ ರೇಡಿಯೋ ವಿಸರಣಸಾಮಥ್ರ್ಯದ 100 ಪಾಲಿನಷ್ಟು ಹೆಚ್ಚಿಗೆ ಇದೆ. ಈ ಆಕರವನ್ನು ಒಂದು ರೇಡಿಯೊಬ್ರಹ್ಮಾಂಡವೆಂದು ಇದುವರೆಗೆ ಪರಿಗಣಿಸಲಾಗಿತ್ತು. ಆದರೆ ಅದರ ಎಕ್ಸ್‍ಕಿರಣವಿಸರಣೆ ರೇಡಿಯೋಗಳು ವಿಸರಣೆಯ ಹಲವಾರು ಪಾಲು ಹೆಚ್ಚು ಇರುವುದರಿಂದ ಅದನ್ನು ಎಕ್ಸ್‍ಕಿರಣ ಬ್ರಹ್ಮಾಂಡವೆಂದೇ ಹೆಸರಿಸುವುದು ಅನುಚಿತವಲ್ಲ. ಎಕ್ಸ್ ಕಿರಣಗಳ ಅಧ್ಯಯನಕ್ಕಾಗಿ ನ್ಯೂಟನ್ ದೂರದರ್ಶಕ ಮೊದಲಾದ ಅನೇಕವು ಬಾಹ್ಯಾಂತರಿಕ್ಷದಲ್ಲಿ ಹಾರಿವೆ. ಇತ್ತೀಚಿನದು ಚಂದ್ರ ದೂರದರ್ಶಕ. ಗ್ಯಾಮಾ ಕಿರಣಗಳಿಗಾಗಿಯೂ ವಿಶೇಷ ಉಪಕರಣಗಳನ್ನು ಹಾರಿಸಲಾಗಿದೆ.
ಸೂರ್ಯನ ವಿಸರಣೆಗಳ ಹೊರತಾಗಿ ವಿಶ್ವದಿಂದ ಬರುವ ಗಾಮಕಿರಣಗಳನ್ನು ಇದುವರೆಗೂ ಖಚಿತವಾಗಿ ಕಂಡುಹಿಡಿಯಲು ಆಗಿಲ್ಲ. ಸೌರವ್ಯೂಹದ ಹೊರಗೆ ಗಾಮಕಿರಣ ವಿಸರಣೆ ಮಾಡುವ ನಿರ್ದಿಷ್ಟ ಆಕರಗಳ ಶೋಧನೆ ನಡೆಯುತ್ತಿದೆ. ಆದರೆ ವಿಶ್ವದ ಹಿನ್ನೆಲೆಯ ಗಲಭೆಯಲ್ಲಿ (ಬ್ಯಾಕ್‍ಗ್ರೌಂಡ್ ನಾಯ್‍ಸ್) ಗಾಮ ವಿಸರಣೆಯೂ ಸೇರಿದೆ ಎಂದು ಖಗೋಳ ವಿe್ಞÁನಿಗಳ ಮತ. ವಿಶ್ವದ ಸಕಲ ಬ್ರಹ್ಮಾಂಡಗಳ ಸಮಸ್ತ ವಿಸರಣೆಗಳ ಸಮಗ್ರ ಪರಿಣಾಮ ಹಿನ್ನೆಲೆಯ ಗಲಭೆ. ಆದ್ದರಿಂದ ಇದರಲ್ಲಿ ಎಕ್ಸ್‍ಕಿರಣಗಳ ಪಾತ್ರ ಎಷ್ಟು ಎಂದು ಖಚಿತವಾಗಿ ನಿರ್ಧಾರವಾಗದೆ ಮುಂದಿನ ಗಾಮವಿಸರಣೆಯ ಪಾತ್ರವನ್ನು ಅಂದಾಜು ಮಾಡುವುದು ಸುಲಭವಾಗುತ್ತದೆ. ಈ ದಿಶೆಯಲ್ಲಿ ಎಕ್ಸ್ ಮತ್ತು ಗಾಮಕಿರಣ ಖಗೋಳಶಾಸ್ತ್ರಗಳು ಹೊಸ ಒಂದು ವಿಸ್ಮಯವಿಶ್ವವನ್ನೇ ನಮ್ಮ ಎದುರು ತೆರೆದಿವೆ. 	
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ